Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಎಲ್ಲೋ ಜೋಗಪ್ಪ ನಿನ್ನರಮನೆ (Kannada Janapada song lyrics)

  Sandeep T Gowda       Monday, August 28, 2017
ಎಲ್ಲೋ ಜೋಗಪ್ಪ ನಿನ್ನರಮನೆ



ಕಿನ್ನೂರಿ ನುಡಿಸೋನಾ ದನಿ ಚೆಂದಾವೊ
ಕಿನ್ನೂರಿ ನುಡಿಸೋನಾ ಬೆರಳಿನಂದ ಚೆಂದವೋ....


ಚಿಕ್ಕಿಯುಂಗರಕೆ ನಾರಿ ಮನಸಿಟ್ಟಳೂ
ಬೆಳ್ಳಿಯುಂಗರಕೆ ನಾರಿ ಮನಸಿಟ್ಟಳೂ
ಎಲ್ಲೋ ಜೋಗಪ್ಪ ನಿನ್ನರಮನೆ
ಎಲ್ಲೊ ಜೋಗಪ್ಪ ನಿನ್ನ ತಳಮನೆ ||

ಅಲ್ಲಲ್ಲಿ ದಾನವೂ ಅಲ್ಲಲ್ಲಿ ಧರ್ಮವೂ
ತಂದಿಡೆ ನಾರಿ ನೀ ನೀ ಸುಖವ |

ಅತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈತಾರೆ
ಕೊಳ್ಳೋ ಜೋಗಪ್ಪ ನಿನ್ನ ಪಡಿದಾನ |

ಇತ್ತಿತ್ತ ಬಂದರೆತ್ತ ಮಾವಂದಿರು ಬಯ್ಯಲಿಕ್ಕೆ
ಅನೆಸಾಲು ನಾನು ಕದ್ದೇನೇನೆ | ನಾರಿ
ಕುದುರೆ ಸಾಲು ನಾನು ಕದ್ದೇನೇನೆ
ಹೆರವಾ ಹೆಣ್ಣಿಗೆ ನಾನು ಬಿದ್ದೆನೇನೆ ||ಎಲ್ಲೋ ಜೋಗಪ್ಪ||


ಇದ್ದ ಬದ್ದ ಬಟ್ಟೆನೆಲ್ಲ ಗಂಟು ಮೂಟೆ ಕಟ್ಟಿಕೊಂಡು......
ಹೊರಟಾಳೂ ಜೋಗಿಯ ಹಿಂದುಗೂಟಿ | ನಾರಿ
ಹೊರಟಾಳೂ ಜೋಗಿಯ ಹಿಂದುಗೂಟಿ..


ಹಾರುವರ ಕೇರಿಯ ಗಾರೆಜಗಲಿಯ ಮೇಲೆ
ಕೋಲು ಕಿನ್ನೂರಿ ಮಾಡಿ ನುಡಿಸೋನೇ | ಜೋಗಿ
ಹೂವಾಗಿ ಬಾರೋ ನನ್ನ ತುರುಬೀಗೆ


ಹುಳ್ಳಿ ಹೊಲವಾ ಬಿಟ್ಟು ಒಳ್ಳೆ ಗಂಡಾನ ಬಿಟ್ಟು
ಸುಳ್ಳಾಡೋ ಜೋಗಿ ಕೂಡೋಗಬಹುದೇ | ನಾರಿ
ಪೊಳ್ಳಂತ ಜೋಗಿ ಕೂಡೋಗಬಹುದೆ || ಎಲ್ಲೋ ಜೋಗಪ್ಪ||


ಎಲ್ಲಾನು ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ
ನನ್ಮೇಲೆ ನಿನಗೆ ಮನಸ್ಯಾಕೆ | ನಾರಿ
ನನ್ಮೇಲೆ ನಿನಗೆ ಮನಸ್ಯಾಕೆ....


ನಿನ್ನ ಕಂಡಾಗಿನಿಂದ ಕಣ್ಣುರಿ ಕಾಣೂ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ ||ಎಲ್ಲೋ ಜೋಗಪ್ಪ||


ಅಂತರಘಟ್ಟ ಬೆಂತರಘಟ್ಟ ಹತ್ತಲಾರೆ ಇಳಿಯಲಾರೆ
ಎಲ್ಲೋ ಜೋಗಪ್ಪ ನಿನ್ನರಮನೆ ಎಲ್ಲೋ ಜೋಗಪ್ಪ ನಿನ ತಳಮಾನೆ

ಅಂತರಘಟ್ಟ ಬೆಂತರಘಟ್ಟ ಅಲ್ಲಿಗರವತ್ತು ಘಟ್ಟ
ಅಲ್ಲಿದೆ ಕಾಣೆ ನನ್ನರಮನೆ | ನಾರಿ
ಅಲ್ಲಿದೆ ಕಾಣೆ ನನ್ನರಮನೆ ನಾರಿ ||ಎಲ್ಲೋ ಜೋಗಪ್ಪ||

logoblog

Thanks for reading ಎಲ್ಲೋ ಜೋಗಪ್ಪ ನಿನ್ನರಮನೆ (Kannada Janapada song lyrics)

Previous
« Prev Post

No comments:

Post a Comment

Note: Only a member of this blog may post a comment.