Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಅದು ಬೆಟ್ಟ ಇದು ಬೆಟ್ಟ (Kannada Janapada song lyrics)

  Sandeep T Gowda       Monday, August 28, 2017
ಅದು ಬೆಟ್ಟ ಇದು ಬೆಟ್ಟ


ಅದು ಬೆಟ್ಟ ಇದು ಬೆಟ್ಟವೋ ನಂಜುಂಡ
ನಂದ್ಯಾಲಗಿರಿ ಬೆಟ್ಟವೋ
ನಂದ್ಯಾಲಗಿರಿ ಬೆಟ್ಟಕೆ | ನಂಜುಂಡ
ದಾಸ್ವಾಳದ ಗಿಡ ಹುಟ್ಟಿತು



ದಾಸ್ವಾಳದ ಹೂವ ತಂದು | ನಂಜುಂಡ
ದಾರ್ಯಾಗ ಪೂಜೆ ಮಾಡಿ
ಹೂ ಬಾಡಿ ಹೋಗಿತಯ್ಯೋ | ನಂಜುಂಡ
ಎದ್ದು ಬಾರಯ್ಯ ಮನೆಗೆ


ಸ್ವಾತಿಯ ಮಳೆ ಹುಯ್ಯಿತೋ | ನಂಜುಂಡ
ಸಂಪಂಗಿ ಕೆರೆ ತುಂಬಿತೋ
ಸಂಪಂಗಿ ಕೆರೆಯ ಕೆಳಗೇ | ನಂಜುಂಡ
ಕೆಂಬತ್ತನೆಲ್ಲ ಬಿತ್ತಿ


ಸಾಲ್ಹಿಡಿದು ಕಬ್ಬ ನೆಟ್ಟು | ನಂಜುಂಡ
ಮುಂಭ್ಹಿಡಿದು ನೀರ ಕೊಟ್ಟು
ಜಲ ನೋಡಿ ಬಾವಿ ತೆಗೆಯೋ | ನಂಜುಂಡ
ಕುಲ ನೋಡಿ ಹೆಣ್ಣು ತೆಗೆಯೋ


ಮೂಡಲ ಸೀಮೆಯವನೇ | ನಂಜುಂಡ
ಮುತ್ತಿನ ಹಾರದವನೆ
ಬಡಗಲ ಸೀಮೆಯವನೇ | ನಂಜುಂಡ
ಬಯಲಾದ ರೂಪದವನೇ


ಸಾಲು ತೆಂಗಿನಮರವೋ | ನಂಜುಂಡ
ಮೇಲೆ ನಂಜಾನ ಗುಡಿಯು
ಹದಿನಾಲ್ಕು ಪರದಕ್ಷಿಣಾ | ನಂಜುಂಡ
ಹದಿನಾಲ್ಕು ಕಿರುದಕ್ಷಿಣಾ

logoblog

Thanks for reading ಅದು ಬೆಟ್ಟ ಇದು ಬೆಟ್ಟ (Kannada Janapada song lyrics)

Previous
« Prev Post

No comments:

Post a Comment

Note: Only a member of this blog may post a comment.