Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಕುಂಜರದ ಬೊಂಬೆ ಕೇಳೆ ಜಲ್ಲರ ಜಾಣೆ (Kannada Janapada song lyrics)

  Sandeep T Gowda       Monday, August 28, 2017
ಕುಂಜರದ ಬೊಂಬೆ ಕೇಳೆ ಜಲ್ಲರ ಜಾಣೆ
ಕುಶಲಾದ ರಂಭೆ ಕೇಳೆ ।
ನಮ್ಮೂರ ಗೌಡನ ಮಗಳು ನೀರಿಗೆ ಹೋಗುವಾಗ
ಕಟ್ಟೆ ಕಲ್ಲಾಗ್ ಬಂದು ಅಡಗಿದ್ದಾನ್ ಹುಡುಗ ।
ಕಟ್ಟೋ ಕಲ್ಲಾಗ್ ಬಂದು ಅಡಗಿರೋ ಹಟ್ಟೀಗೆ
ಹೊನ್ನಾಳಿ ಹೊಳೆಯಾಗಿ ಹರಿದಿದ್ದಾಳ್ ಹುಡುಗಿ ।
ಹೊನ್ನಾಳಿ ಹೊಳೆಯಾಗಿ ಹರಿದೀರೊ ಹೊತ್ತೀಗೆ
ಅಡ್ಡ ಏರಿಯಾಗೆ ಬೆಳೆದಿದ್ದಾನ್ ಹುಡುಗ ।। ಕುಂಜರದ ।।
ಅಡ್ಡ ಏರಿಯಾಗೆ ಬೆಳೆದೀರೊ ಹೊತ್ತೀಗೆ
ತೆಂಗಿನಮರವಾಗಿ ಬೆಳೆದಿದ್ದಾಳ್ ಹುಡುಗಿ ।
ತೆಂಗಿನ ಮರವಾಗಿ ಬೆಳೆದಿರೋ ಹೊತ್ತೀಗೆ
ಮರವೇರಿ ಎಳೆನೀರ ಕುಡಿದಿದ್ದಾನ್ ಹುಡುಗ ।। ಕುಂಜರದ ।।
ಮರವೇರಿ ಎಳೆನೀರ ಕುಡಿದಿರೋ ಹೊತ್ತೀಗೆ
ಜ್ವಾಳದ ಕಾಳಾಗಿ ಚಿಮ್ಮಿದ್ದಾಳ್ ಹುಡುಗಿ
ಜ್ವಾಳದ ಕಾಳಾಗಿ ಚಿಮ್ಮಿರೊ ಹೊತ್ತೀಗೆ
ಕೋಳಿಹುಂಜಾಗಿ ಕುಕ್ಕಿದ್ದಾನ್ ಹುಡುಗ ।। ಕುಂಜರದ ।।
ಕೋಳಿ ಹುಂಜಾಗಿ ಕುಕ್ಕೀರೊ ಹೊತ್ತೀಗೆ
ಹೆಬ್ಬುಲಿಯಾಗಿ ನಿಂತಿದ್ದಾಳ್ ಹುಡುಗಿ ।
ಹೆಬ್ಬುಲಿಯಾಗಿ ನಿಂತಿರೋ ಹೊತ್ತೀಗೆ
ಚಿನ್ನದ ಕಟ್ಟಿನ ಕೋವಿ ಹಿಡಿದಿದ್ದಾನ್ ಹುಡುಗ ।। ಕುಂಜರದ ।।
ಚಿನ್ನದ ಕಟ್ಟಿನ ಕೋವಿ ಹಿಡಿದೀರೊ ಹೊತ್ತೀಗೆ
ಮುತ್ತಿನ ಸೆರಗೊಡ್ಡಿ ಬೇಡಿದ್ದಾಳ್ ಹುಡುಗಿ ।। ಕುಂಜರದ ।।
logoblog

Thanks for reading ಕುಂಜರದ ಬೊಂಬೆ ಕೇಳೆ ಜಲ್ಲರ ಜಾಣೆ (Kannada Janapada song lyrics)

Previous
« Prev Post

No comments:

Post a Comment

Note: Only a member of this blog may post a comment.