ಆಷಾಢಮಾಸ ಬಂದಿತಮ್ಮ
ತೌರಿಂದ ಅಣ್ಣಾ ಬರಲಿಲ್ಲ
ಎಷ್ಟು ನೆನೆಯಾಲಿ ಅಣ್ಣಾನ ದಾರಿಯ
ಸುವ್ವನಾರೀ ಸುವ್ವೋನಾರಿ।।
ತೌರಿಂದ ಅಣ್ಣಾ ಬರಲಿಲ್ಲ
ಎಷ್ಟು ನೆನೆಯಾಲಿ ಅಣ್ಣಾನ ದಾರಿಯ
ಸುವ್ವನಾರೀ ಸುವ್ವೋನಾರಿ।।
ಅರಕೆರೆ ಬನ್ನೂರು ಅದೇ ನನ್ನ ತವರೂರು
ಸರಕಾನೆ ಎದ್ದು ಬರುತೀಯೆ । ಅಣ್ಣಯ್ಯ
ಸರ ಕಾಣೋ ನಿನ್ನ ದೊರೆತಾನೆ ।।
ಸರಕಾನೆ ಎದ್ದು ಬರುತೀಯೆ । ಅಣ್ಣಯ್ಯ
ಸರ ಕಾಣೋ ನಿನ್ನ ದೊರೆತಾನೆ ।।
ಕೆಂದೆತ್ತು ಕೈಯಲ್ಲಿ ಕೆಂಪಂಗಿ ಮೈಯಲ್ಲಿ
ಚಿನ್ನದ ಬಾರುಕೋಲು ತಕ್ಕೊಂಡು । ಬರುತಾನೆ
ಅಣ್ಣಯ್ಯ ತಂಗಿಯ ಕರೆಯೋಕೆ ।।
ಚಿನ್ನದ ಬಾರುಕೋಲು ತಕ್ಕೊಂಡು । ಬರುತಾನೆ
ಅಣ್ಣಯ್ಯ ತಂಗಿಯ ಕರೆಯೋಕೆ ।।
ತವರೂರ ದಾರೀಲಿ ತೆಗೆಸಣ್ಣ ಬಾವಿಯ
ಅಕ್ಕ – ತಂಗಿರು ತಿರೋಗಾಡೋ । ದಾರೀಲಿ
ತೆಗೆಸಣ್ಣ ಕಲ್ಯಾಣದ ಬಾವೀಯ।।
ಅಕ್ಕ – ತಂಗಿರು ತಿರೋಗಾಡೋ । ದಾರೀಲಿ
ತೆಗೆಸಣ್ಣ ಕಲ್ಯಾಣದ ಬಾವೀಯ।।
ತೌರೂರು ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ । ದಾರೀಲಿ
ಬಿಸಿಲಿನ ಬೇಗೆಯು ಸುಡಲಿಲ್ಲ ।।
ಸಾಸಿವೆಯಷ್ಟು ಮರಳಿಲ್ಲ । ದಾರೀಲಿ
ಬಿಸಿಲಿನ ಬೇಗೆಯು ಸುಡಲಿಲ್ಲ ।।
No comments:
Post a Comment
Note: Only a member of this blog may post a comment.