ಜಿ. ಎಸ್. ಶಿವರುದ್ರಪ್ಪ,
ಓ ತಾಯಿ ಓ ತಾಯಿ ಮುಳುಗುತಿದೆ ನೌಕೆ
ಈ ಜಗದ ಕತ್ತಲಿನ ಕಡಲ ತೆರೆ ತಳಕೆ !
ಸುತ್ತ ಮುತ್ತಲಿನಿಂದ ಮಾಯ ಮೋಹದ ಗಾಳಿ
ಬೀಸಿ ದಾಳಿಯ ಮಾಡಿ ಭೋರಾಡಿದೆ !
ಈ ಜಗದ ಕತ್ತಲಿನ ಕಡಲ ತೆರೆ ತಳಕೆ !
ಸುತ್ತ ಮುತ್ತಲಿನಿಂದ ಮಾಯ ಮೋಹದ ಗಾಳಿ
ಬೀಸಿ ದಾಳಿಯ ಮಾಡಿ ಭೋರಾಡಿದೆ !
ಮನವಿಲ್ಲಿ ಮಂಕಾಯ್ತು, ಅರಿವರ್ಗ ಬಲವಾಯ್ತು,
ಹುಟ್ಟೊಡೆದು ಪಟಹರಿದು ಮುರಿದು ಬಿತ್ತು.
ನಿಷ್ಕರುಣ ಗಾಳಿಯಲಿ ನನ್ನ ದೋಣಿಯು ಬಂದು,
ಇಂದು ಈ ಗತಿಯಲ್ಲಿ ಸಿಕ್ಕುದಾಯ್ತು.
ಹುಟ್ಟೊಡೆದು ಪಟಹರಿದು ಮುರಿದು ಬಿತ್ತು.
ನಿಷ್ಕರುಣ ಗಾಳಿಯಲಿ ನನ್ನ ದೋಣಿಯು ಬಂದು,
ಇಂದು ಈ ಗತಿಯಲ್ಲಿ ಸಿಕ್ಕುದಾಯ್ತು.
ಇದೊ ನುಗ್ಗುತಿದೆ ನೋಡು, ದೋಣಿಯೊಳಗಡೆ ನೀರು,
ಹೇಳು ನಾನಿನ್ನೀಗ ಮಾಳ್ಪುದೇನು ?
ಸೋತ ಕಣ್ಣಿನ ಸುತ್ತ ಕತ್ತಲೆಯ ಪರಿವಾರ,
ನಿನ್ನ ನಾಮವೆ ನನಗೆ ತೇಲೊಟ್ಟಿಲು !
ಹೇಳು ನಾನಿನ್ನೀಗ ಮಾಳ್ಪುದೇನು ?
ಸೋತ ಕಣ್ಣಿನ ಸುತ್ತ ಕತ್ತಲೆಯ ಪರಿವಾರ,
ನಿನ್ನ ನಾಮವೆ ನನಗೆ ತೇಲೊಟ್ಟಿಲು !
No comments:
Post a Comment
Note: Only a member of this blog may post a comment.