ಗೊತ್ತಿರಲಿಲ್ಲ ಯಾರಿಗೂ ದಾರಿಬದಿ
ಅರಣ್ಯದ ಮಧ್ಯೆ ಹೀಗೊಂದು ಕಲ್ಪ-
ವೃಕ್ಷವಿರಬಹುದು ಎನ್ನುವ ವಿಷಯ.
ಒಂದು ದಿನ ಮಟ ಮಟ ಮಧ್ಯಾಹ್ನ-
ದುರಿಬಿಸಿಲಲ್ಲಿ ಪಯಣಿಗನೊಬ್ಬ
ಅಕಸ್ಮಾತ್ತಾಗಿ ಈ ಮರದ ನೆರಳಿನ
ಕೆಳಗೆ ಬಂದು ಕೂತ. ನಡೆದು ನಡೆದೂ
ತುಂಬ ಸುಸ್ತಾಗಿತ್ತು. ಗಂಟಲು ಒಣಗಿ
ಹೊಟ್ಟೆಯ ಒಳಗೆ ಹಸಿವಿನ ಕುದಿತ.
ಅರಣ್ಯದ ಮಧ್ಯೆ ಹೀಗೊಂದು ಕಲ್ಪ-
ವೃಕ್ಷವಿರಬಹುದು ಎನ್ನುವ ವಿಷಯ.
ಒಂದು ದಿನ ಮಟ ಮಟ ಮಧ್ಯಾಹ್ನ-
ದುರಿಬಿಸಿಲಲ್ಲಿ ಪಯಣಿಗನೊಬ್ಬ
ಅಕಸ್ಮಾತ್ತಾಗಿ ಈ ಮರದ ನೆರಳಿನ
ಕೆಳಗೆ ಬಂದು ಕೂತ. ನಡೆದು ನಡೆದೂ
ತುಂಬ ಸುಸ್ತಾಗಿತ್ತು. ಗಂಟಲು ಒಣಗಿ
ಹೊಟ್ಟೆಯ ಒಳಗೆ ಹಸಿವಿನ ಕುದಿತ.
ಹಾ! ದೇವರೇ, ಯಾರಾದರೂ ಈಗ
ಒಂದು ತಟ್ಟೆಯ ತುಂಬ ಪುಷ್ಕಳವಾದ
ಭೋಜನವನ್ನು ತಂದಿಕ್ಕಬಾರದೆ
ಎಂದ. ಹಾಗಂದಿದ್ದೆ ತಡ ಪ್ರತ್ಯಕ್ಷ-
ವಾಯಿತು ಒಂದು ಊಟದ ತಟ್ಟೆ !
ಅದರ ತುಂಬಾ ಬಿಸಿಯಾದ ಮೃಷ್ಟಾನ್ನ !
ಒಂದು ತಟ್ಟೆಯ ತುಂಬ ಪುಷ್ಕಳವಾದ
ಭೋಜನವನ್ನು ತಂದಿಕ್ಕಬಾರದೆ
ಎಂದ. ಹಾಗಂದಿದ್ದೆ ತಡ ಪ್ರತ್ಯಕ್ಷ-
ವಾಯಿತು ಒಂದು ಊಟದ ತಟ್ಟೆ !
ಅದರ ತುಂಬಾ ಬಿಸಿಯಾದ ಮೃಷ್ಟಾನ್ನ !
ಎಲ ಎಲಾ ಏನಿದು ಪವಾಡ ಅನ್ನುತ್ತ
ಭೋಜನ ಮುಗಿಸಿ ಯೋಚಿಸಿದ : ಊಟ-
ವೇನೋ ಆಯ್ತು : ಇಂಥ ಭರ್ಜರಿ ಊಟ-
ವಾದ ಮೇಲೊಂದು ಮೆತ್ತನೆಯ ಹಾಸಿಗೆ-
ಯಾದರೂ ಇದ್ದಿದ್ದರೆ…. ನೋಡುತ್ತಾನೆ
ಎದುರಿಗೆ ಒಂದು ಮಂಚ, ಅದರ ಮೇ-
ಲೊಂದು ಸೊಗಸಾದ ಹಾಸಿಗೆ ! ತಿರುಗ
ತೊಡಗಿತ್ತು ಮೊದಲ ವಿಸ್ಮಯವೀಗ ಅನು-
ಮಾನಕ್ಕೆ. ಆದರೂ ಮಂಚದ ಮೇಲೆ
ಕೂತು ದಿಟ್ಟಿಸಿದ. ಸುತ್ತಲೂ ದಟ್ಟವಾ-
ದಡವಿ. ಕೇಳುವವರೇ ಇಲ್ಲ. ಇಂಥ ಈ
ನಿರ್ಜನವಾದರಣ್ಯದೊಳಗೆಲ್ಲಾದರೂ
ಒಂದು ಹುಲಿ-ಗಿಲಿ ಬಂದರೇನಪ್ಪಾ
ನನ್ನ ಗತಿ ಎಂದ. ಅದೆಲ್ಲಿಂದಲೋ
ಹಠಾತ್ತಾಗಿ ಬಂತೊಂದು ಹೆಬ್ಬುಲಿ. ಮುಂ
ದೇನಾಯ್ತು ನಿಮಗೆ ಗೊತ್ತಿದೆ. ಬಯಸಿದ್ದನ್ನು ಥಟ್ಟನೆ
ಕೊಡುವ ಕಲ್ಪವೃಕ್ಷದ ತಪ್ಪು ಇಲ್ಲೇನಿದೆ?
ಭೋಜನ ಮುಗಿಸಿ ಯೋಚಿಸಿದ : ಊಟ-
ವೇನೋ ಆಯ್ತು : ಇಂಥ ಭರ್ಜರಿ ಊಟ-
ವಾದ ಮೇಲೊಂದು ಮೆತ್ತನೆಯ ಹಾಸಿಗೆ-
ಯಾದರೂ ಇದ್ದಿದ್ದರೆ…. ನೋಡುತ್ತಾನೆ
ಎದುರಿಗೆ ಒಂದು ಮಂಚ, ಅದರ ಮೇ-
ಲೊಂದು ಸೊಗಸಾದ ಹಾಸಿಗೆ ! ತಿರುಗ
ತೊಡಗಿತ್ತು ಮೊದಲ ವಿಸ್ಮಯವೀಗ ಅನು-
ಮಾನಕ್ಕೆ. ಆದರೂ ಮಂಚದ ಮೇಲೆ
ಕೂತು ದಿಟ್ಟಿಸಿದ. ಸುತ್ತಲೂ ದಟ್ಟವಾ-
ದಡವಿ. ಕೇಳುವವರೇ ಇಲ್ಲ. ಇಂಥ ಈ
ನಿರ್ಜನವಾದರಣ್ಯದೊಳಗೆಲ್ಲಾದರೂ
ಒಂದು ಹುಲಿ-ಗಿಲಿ ಬಂದರೇನಪ್ಪಾ
ನನ್ನ ಗತಿ ಎಂದ. ಅದೆಲ್ಲಿಂದಲೋ
ಹಠಾತ್ತಾಗಿ ಬಂತೊಂದು ಹೆಬ್ಬುಲಿ. ಮುಂ
ದೇನಾಯ್ತು ನಿಮಗೆ ಗೊತ್ತಿದೆ. ಬಯಸಿದ್ದನ್ನು ಥಟ್ಟನೆ
ಕೊಡುವ ಕಲ್ಪವೃಕ್ಷದ ತಪ್ಪು ಇಲ್ಲೇನಿದೆ?
No comments:
Post a Comment
Note: Only a member of this blog may post a comment.