Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, February 4, 2014

ನಿನ್ನ ನಿನ್ನವರ ನುಂಗಿ ನೊಣೆವೆ ನಾ…..

  Sandeep T Gowda       Tuesday, February 4, 2014



ಗಂಡಯೋಗದಲಿ ಜನಿಸಿದಂಥ ಶಿಶು ತಿನುವುದಂತೆ ತಾಯ !
ನಾನು ಅಂಥ ಶಿಶು ; ನಿನ್ನ ನುಂಗುವೆನು ತೆರೆದು ನನ್ನ ಬಾಯ,
ನೀನೆ ನುಂಗುವೆಯೊ ನಾನೆ ನುಂಗಲೋ ಹೇಳು ಹೇಳು ಬೇಗ
ಎರಡರೊಳಗೆ ಒಂದಾಗಿಬಿಡಲಿ ನೀ ಹೇಳು, ಕಾಳಿ, ಈಗ !
ಕಾಳಿ ಕಾಡಿಗೆಯ ಕೈಗೆ ಮೈಗೆ ನಾ ಬಳಿದುಕೊಂಡು ನಿಲುವೆ
ಮೃತ್ಯು ಬರಲು ನಾನವನ ಮುಖಕು ಈ ಕಾಳಿಯನ್ನೆ ಬಳಿವೆ !
ನಿನ್ನ ನುಂಗಿದರು ನಿನ್ನನರಗಿಸಲು ಆಗದೆನಗೆ ತಾಯಿ !
ಹೃದಯ ಪದ್ಮದಲಿ ನಿನ್ನನಿರಿಸಿ ನಾ ಪೂಜೆಗೈವೆ ಮನದಿ.
ನಿನ್ನ ನುಂಗಿದರೆ, ನಿನ್ನ ಪತಿದೇವ ಆ ಕಾಳ ರೇಗಬಹುದು.
ನಿನ್ನ ನಾಮವನೆ ಜಪಿಸಿ ಕಾಳನನು ತಾನು ತಡೆಯಬಹುದು.
ನಾನು ನಿನ್ನ ಮಗನೆಂಬ ಮಹಿಮೆಯನು ಜಗಕೆ ತೋರಲೆಂದೇ
ನಿನ್ನ, ನಿನ್ನವರ ನುಂಗಿ ನೊಣೆವೆ ನಾ ಜೀವ ಹೋಗಲಿಂದೇ !
logoblog

Thanks for reading ನಿನ್ನ ನಿನ್ನವರ ನುಂಗಿ ನೊಣೆವೆ ನಾ…..

Previous
« Prev Post

No comments:

Post a Comment

Note: Only a member of this blog may post a comment.