ತೆರೆದಿದೆ ಮನೆ ಓ...
- ಕುವೆಂಪು
ತೆರೆದಿದೆ ಮನೆ ಓ ಬಾ ಅಥಿತಿ ||
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅಥಿತಿ
ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಗೆಯ ಬಾ
ತಿಂಗಳಂದದಲಿ ಬಗೆಯ ಬಾ
ಇಂತಾದರು ಬಾ ಅಂತಾದರೂ ಬಾ ಎಂತಾದರು ಬಾ ಬಾ ಬಾ
ಬೇಸರವಿದನು ಸರಿಸುವ ಹೊಸಬಾಳ ಉಸಿರಾಗಿ ಬಾ ಬಾ ಬಾ
ಕಡಲಾಗಿ ಬಾ ಬಾನಾಗಿ ಬಾ ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನವು ಬಾ
ಹೊಸತಾನದ ಹೊಸಗಾನದ
ರಸ ಜೀವ ತಾ ತಾ ತಾ
No comments:
Post a Comment
Note: Only a member of this blog may post a comment.