ಬೃಂದಾವನಕೆ ಹಾಲನು...
- ಕುವೆಂಪು
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ ||
ಬೃಂದಾವನದಿ ಹಾಲನು ಕೊಳ್ಳುವ
ಆರಿಹರೆ ಹೇಳ್ ಇಂಧುಮುಖಿ?
ಗೋವನು ಕಾಯುವ ಗೋವಿಂದನಿಹನೆ?
ಹಾಲನು ಕೊಳ್ಳುವ ಹೇಳೆ ಸಖಿ
ಚಿನ್ನವ ಕೊಡನೆ ರನ್ನವ ಕೊಡನೆ
ತನ್ನನೆ ಕೊಡುವನು ಬಾರೆ ಸಖಿ
ಕಣ್ಣನು ಮೊಹಿಪ ಪೀತಾಂಬರವನು
ಬಣ್ಣದ ಬಳೆಗಳ ದರಿಸು ಸಖಿ
ಚೆನ್ನವ ಮೊಹಿಸುವೆದೆಯನು ಹಾರವು
ಸಿಂಗರಿಸಲೇ ಹೇ! ನಳಿನಮುಖಿ
ಯಮುನಾ ತೀರದ ಅಲೆಯುವ ಬಾರೆ
ಹಾಲು ಬೇಕೆ ಹಾಲೆಂದು ಸಖಿ
ಹಾಲನು ಮಾರುವ ನೆವದಿಂದ ಹರಿಯ
ಮೋಹಿಸಿ ಕರೆಯುವ ಬಾರೆ ಸಖಿ
ಹಾಲನಿವೇದಿಸಿ ಆತ್ಮವನರ್ಪಿಸಿ
ಮುಕ್ತಿಯ ಹೊಂದುವ ಸೌಮ್ಯಮುಖಿ
ಹಾಲನು ಮಾರಿ ಹರಿಯನು ಕೊಳ್ಳುವ
ನಾವೇ ಧನ್ಯರು ಕಮಲಮುಖಿ
ನಮ್ಮೀ ಲಾಭವ ಮೀರುವ ಲಾಭವು
ಬೇರಿನ್ನಿಹುದೇ ಇಂಧುಮುಖಿ?
ಬ್ರಿಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ
No comments:
Post a Comment
Note: Only a member of this blog may post a comment.