ಮುಗಿಲ ಮಾರಿಗೆ ರಾಗ...
- ದ. ರಾ. ಬೇಂದ್ರೆ
ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ ||
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗೆ ಚಂದ್ರನ ಚೊಗಚಿ ನಗಿವು ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳು ಹರಳಿನ ಅರಳು ಮಲ್ಲಿಗೆ ಜಾಲಿಗೆ ಹಂಗಿತ್ತ
ಸುಸ್ಯಾವ ಚಿಕ್ಕಿ ಅತ್ತಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಲು ಬೇಕ್ಕಿನ್ಹಾಂಗ ಭಾವಿ ಹಾದಿ ಕಾಳಾಗ ಕುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ
ಮಳ್ಳ ಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ ಮತ ಬೆರಗಿನ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಲ್ಲಿಗೆ ಬೆನ್ನಿಗೆ ಬರತಿತ್ತ
ತನ್ನ ಮೈಮನ ಮರೆತಿತ್ತ
No comments:
Post a Comment
Note: Only a member of this blog may post a comment.