ಅಂಥಿಂಥ ಹೆಣ್ಣು...
- ಕೆ.ಎಸ್. ನರಸಿಂಹಸ್ವಾಮಿ
ಅಂಥಿಂಥ ಹೆಣ್ಣು ನೀನಲ್ಲ ನಿನ್ನಂಥ ಹೆಣ್ಣು ಇನ್ನಿಲ್ಲ ||
ಹೆಡೆಹೆಡೆಯ ಸಾಲು ತುರುಬೆಲ್ಲ ಗುಡಿನಿಂದ ಹೂವು ಮೇಲೆಲ್ಲ
ತೆರೆತೆರೆಯ ಹೊರಳು ಕುರುಳೆಲ್ಲ ಸುಳಿ ಮಿಂಚು ಕಣ್ಣ ಹೊರಳೆಲ್ಲ
ಎದೆ ಮಟ್ಟ ನಿಂತ ಹೂ ಬಳ್ಳಿ ಎಷ್ಟೊಂದು ಹೂವು ಅದರಲ್ಲಿ
ಉಸಿರುಸಿರು ಮೊಗ್ಗು ಹೂವೆಲ್ಲ ನೀ ಬಳ್ಳಿ ಬೆಳಕು ಬದುಕೆಲ್ಲ
ನಡು ದಾರಿಯಲ್ಲಿ ನನ್ನೂರು ಕುಡಿ ಮಿಂಚಿನೂರು ಹೊನ್ನೂರು
ಮುನ್ನೂರು ಮಿಂಚು ಹೊಳೆದಂತೆ ನೀ ಬಂದರೆನಗೆ ಸಿರಿವಂತೆ
ಬಲು ದೂರ ದೂರ ನೀನಾಗಿ ಹೊಂಗನಸು ನಡುವೆ ದನಿತೂಗಿ
ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ
No comments:
Post a Comment
Note: Only a member of this blog may post a comment.