Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, January 10, 2013

ಕಾಂತನಿಲ್ಲದ ಮ್ಯಾಲೆ...

  Sandeep T Gowda       Thursday, January 10, 2013

ಕಾಂತನಿಲ್ಲದ ಮ್ಯಾಲೆ...

- ಚಂದ್ರ ಶೇಖರ ಕಂಬಾರ

ಕಾಂತನಿಲ್ಲದ ಮ್ಯಾಲೆ ಎಕಾಂತವ್ಯಾತಕೆ ?
ಗಂಧ ಲೇಪನವ್ಯಾತಕೆ ಈ ದೇಹಕೆ ? ||

ಮಂದ ಮಾರುತ ಮೈಗೆ ಬಿಸಿಯಾದರೆ ತಾಯಿ
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ
ಹೂ ಜಾಜಿ ಸೂಜಿಯ ಹಾಗೆ ಚುಚ್ಚುತಲಿವೆ

ಉರಿಗಾಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿಯವಗೆ ತಾಗದೆ ಹುಸಿ ಹೋಯ್ತೆ
ಚೆಲುವ ಬಾರದಿರೇನು ಫಲವೆ ಈ ಚೆಲುವಿಗೆ ?

ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆನ
ಆರ್ತಳಿಗೆ ಆಶ್ರಯವಿರದೆ ಒದ್ದಾಡುವೆ

ಅನ್ಯ ಪುರುಷನು ಮಾರ ಅಂಗನೆಯ ನೆಳದಾರೆ
ಕೈ ಹಿಡಿದ ಸರಿ ಪುರುಷ ಸುಮ್ಮನಿರತಾರೆನೆ ?
ಕರುಣೆಯ ತೋರುವರ್ಯಾರೆ ಸಣ್ಣವಳಿಗೆ ?
logoblog

Thanks for reading ಕಾಂತನಿಲ್ಲದ ಮ್ಯಾಲೆ...

Previous
« Prev Post

No comments:

Post a Comment

Note: Only a member of this blog may post a comment.