Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, January 10, 2013

ರಾಮ ನಾಮ ಪಾಯಸಕ್ಕೆ...

  Sandeep T Gowda       Thursday, January 10, 2013



ರಾಮ ನಾಮ ಪಾಯಸಕ್ಕೆ...

- ಪುರಂದರ ದಾಸ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಬೆಸರಿ ಬಾಯಿ ಚಪ್ಪರಿಸಿರೋ ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು ಸಣ್ಣ ಶಾವಿಗೆ ಮಾಡಿರೋ

ಹೃದಯವೆಂಬೋ ಮಡಿಕೆಯಲ್ಲಿ ಭಾವವೆಂಬೋ ಹೆಸರು ಇಟ್ಟು
ಬುದ್ಧಿ ಇಂದ ಪಕ್ವವ ಮಾಡಿ ಹರಿವಾಣದಿ ಬಡಿಸಿಕೊಂಡು
ಆನಂದ ಆನಂದವೆಂಬೋ ತೇಗು ಬಂದಾಗ, ಎರಡು ತೇಗು ಬಂದಾಗ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೋ


logoblog

Thanks for reading ರಾಮ ನಾಮ ಪಾಯಸಕ್ಕೆ...

Previous
« Prev Post

No comments:

Post a Comment

Note: Only a member of this blog may post a comment.