ಕಲಿಯಿರೊಂದು ಪಾಠವನ್ನು...
- ಜಿ.ವಿ. ಐಯ್ಯರ್
ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೇ ||
ಕಲ್ಲ ಕಡೆದು ಮೂರ್ತಿ ಮಾಡುವೆನ್ನ ಪುಟ್ಟ ಶಿಲ್ಪಿಗಳೆ
ವಿಧ್ಯೆಯಲ್ಲೇ ವಿನಯವಿದೆ ವಿನಯದಲ್ಲೇ ಕೀರ್ತಿ ಇದೆ
ನಿಮ್ಮ ಕೈಯ ಮುಷ್ಟಿಯೊಳಗೆ ತಾಯ ಬಯೆಕೆ ಬಹಳವಿದೆ
ವಿಜಯನಗರದಲ್ಲಿ ವಿಧ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ ತೊಡೆಯೇ ತಾನೆ ನಿಂತರು
ಎಳೆಯ ತನದೆ ಎಲ್ಲ ವಿಧ್ಯೆ ಕಲಿತು ಯೋಗಿಯಾದರು
ಕನ್ನಡ ತಾಯ್ ಮಡಿಲ ತುಂಬ ಹೊನ್ನ ಮಳೆಯ ಸುರಿಸಿದರು
ಇಮ್ಮಡಿ ಪುಲಕೇಶಿಯಂತೆ ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು ಪದವಿ ಮೋಹ ಬಿಡಬೇಕು
ತ್ಯಾಗ ಬುದ್ಧಿಯಿಂದ ನೀವು ತಾಯ ಸೇವೆ ಮಾಡಬೇಕು
ಕಲಿತು ಕಲಿಗಳಾಗ ಬೇಕು ನಾಳೆ ನಾಡ ನಾಳಬೇಕು
No comments:
Post a Comment
Note: Only a member of this blog may post a comment.