ಸರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ
ಚಿತ್ರಗೀತೆ | ಜಾನಿ ಮೇರಾ ನಾಮ್ ಪ್ರೀತಿ ಮೇರಾ | ಯೋಗರಾಜ್ ಭಟ್ | ೨೦೧೧
ಸರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು ಒಂದೊಳ್ಳೆ ಕಂಬ್ಳಿ ಇಲ್ಲಾ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಗುಲಾಬಿ ಪ್ಲವರ್ರು , ತಲೆ ಕೈಲಿ ಹಿಡ್ಕೊ ಬ್ರದರ್ರು
ನಮ್ಮಲ್ಲಿ ಹುಡುಗಿರು ತುಂಬಾನೇ ಹುಸಾರು
ಹಾರ್ಟು ತೆಗೆದು ಕೈಗೆ ಇಟ್ಟ್ರು ಬೀಳೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨)
ಸರ್ಟು ............... ಹೋಗ್ಬೋದು
ಫ್ರೆಂಡ್ಸೆಲ್ಲಾ ಹೇಳ್ರಪ್ಪಾ ನಾನು ಇದೆ ಥರಾ , ಲವ್ವು ನಂಬ್ಕೊಂಡು ಯಾರ್ನೊ ಕಾಯ್ಕೊಂಡು ಹೃದಯಾ ಕೆರ್ಕೋಬೇಕಾ
ನನ್ನಂತಾ ಬ್ಯಾಚುಲರ್ ಹಿಂಗೆ ಪದೇ ಪದೇ, ಎಜು ಇಟ್ಕೊಂಡು ಗ್ಯಾಪು ಕೊಟ್ಕೊಂಡು ಹೊಗೆಯಾ ಹಾಕ್ಕೊಬೇಕಾ
ಈವರೆಗೆ ಡ್ಯಾನ್ಸು ಮಾಡಿರುವೆ ಬ್ಯಾಂಡೇ ಇಲ್ಲಾ ಅದು ಮಗನ ಹಾಗೆ ಬದುಕಿರುವೆ ಹೆಣ್ಣೇ ಇಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಮಾರ್ನಿಂಗ್ ಯಾಕೆ ನೀನು ಫೇರ್ ಎಂಡ್ ಲವ್ಲಿ ಹಚ್ಚೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨) ||೧||
ಹೆಣ್ಮಕ್ಳು ಕೇಳ್ಬೇಕು ನಾನು ಕುರಿ ಥರಾ , ಮ್ಯಾರೇಜ್ ಆಗ್ಬಿಟ್ರೇ ಚಿಲ್ರ್ ನ್ ಮಾಡ್ಬುಟ್ಟು ಸ್ಕೂಲು ಸೇರಿಸ್ತೀನಿ
ನಿಮ್ಮಾಣೇ ನಾನೆಂದು ಖಾಲಿ ಬಿಡೋದಿಲ್ಲಾ ನಿಮ್ಮಾ ಹೊಟ್ಟೆನಾ ವೈಟು ರೊಟ್ಟಿನಾ ಹೆಂಗೋ ಗಿಟ್ಟಿಸ್ತೀನಿ
ಅಮ್ಮಾ ಇಂಥಾ ಒಳ್ಳೆ ಹಸ್ಬೆಂಡು ಸಿಕ್ಕೋದಿಲ್ಲಾ ಇದು ತುಂಬಾ ಒಳ್ಳೆ ಆಫರ್ರು ಕ್ಲೋಜಾಗಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಈವನಿಂಗ್ ಹೆಂಡ್ತಿ ಮುಕ ನೋಡೋದಷ್ಟು ಈಸಿ ಅಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨) ||೨||
No comments:
Post a Comment
Note: Only a member of this blog may post a comment.