Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, October 19, 2012

ಓ ನನ್ನ ಚೇತನ ಆಗು ನೀನು ಅನಿಕೇತನ

  Sandeep T Gowda       Friday, October 19, 2012

ಹಾಡು: ಓ ನನ್ನ ಚೇತನ ಆಗು ನೀನು ಅನಿಕೇತನ
ರಚನೆ: ಕುವೆಂಪು
ಗಾಯನ:  ಶ್ರೀ. ಮೈಸೂರು ಅನಂತಸ್ವಾಮಿ
ಸಂಗ್ರಹ: ಭಾವ ಸಂಗಮ

ಓ ನನ್ನ ಚೇತನ, ಆಗು ನೀ ಅನಿಕೇತನ
ರೂಪರೂಪಗಳನು ದಾಟಿ, ನಾಮಕೊಟ್ಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನೀ ಅನಿಕೇತನ

ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು,
ಓ ನನ್ನ ಚೇತನ, ಆಗು ನೀ ಅನಿಕೇತನ

ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
ಅನಂತ ನೀ ಅನಂತವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ
logoblog

Thanks for reading ಓ ನನ್ನ ಚೇತನ ಆಗು ನೀನು ಅನಿಕೇತನ

Previous
« Prev Post

No comments:

Post a Comment

Note: Only a member of this blog may post a comment.