ಕಲ್ಲರಳಿ ಹೂವಾಗಿ (2006) - ಕಲ್ಲರಳಿ ಹೂವಾಗಿ
ಕಲ್ಲರಳಿ ಹೂವಾಗಿ | ಚಿತ್ರಗೀತೆ | ಹಂಸಲೇಖ | ೨೦೦೬
ಚಿತ್ರ: ಕಲ್ಲರಳಿ ಹೂವಾಗಿ
ಸಾಹಿತ್ಯ, ಸಂಗೀತ: ಹಂಸಲೇಖ
ಹಾಡಿರುವವರು: ಹೇಮಂತ್
ಕೊಟ್ರವ್ವ ಊಹುಂ
ಎಲ್ಲವ್ವ ಊಹುಂ
ಕನಕವ್ವ ಊಹುಂ
ಲಚ್ಮವ್ವ ಊಹುಂ
ಗಂಗವ್ವ ಊಹುಂ
ಗೌರವ್ವ ಊಹುಂ
ಯಾರಪ್ಪೋ
ರತ್ನ..
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ ಘಲ್ಲೆಂದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ ಝುಮ್ಮೆಂದಳು ಎದೆಯಲಿ ಪದವಾಗಿ
ಈ ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ
ಬೆನ್ ಹತ್ತಿದೆ ನನ್ನ ಪಂಚೇರು ಜೀವ
ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಗ
ಜೀಕಾಡಿದೆ ನನ್ನ ಅರೆಪಾವು ಗುಂಡಿಗೆ
ನಿನಗೊಂದು ಕೋಟೆ ಕಟ್ಟುವೆನು ನಾನು
ರಾಣಿಯಾಗಿ ನನ್ನ ಪಾಲಿಸುವೆಯೇನು
ನಿನಗೆ ನನ್ನೆದೆಯೆ ಅಂತಃಪುರ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ ಅಚ್ಚಾದಳು ಎದೆಯಲಿ ಪದವಾಗಿ
ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನನ ತೋರಿಸ್ದ ನನಗೆ
ಈ ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೆಲಿ ನನ್ನಿಟ್ಟ ಕೊನೆಗೆ
ನಿನ್ನ ನೆನೆ ನೆನೆಗೆ ಬಿಸಿಲಲು ಕನಸೆ
ನೀನು ಬಳುಕಾಡಿ ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ ಒಂದಾದಳು ಎದೆಯಲಿ ಪದವಾಗಿ
No comments:
Post a Comment
Note: Only a member of this blog may post a comment.