Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, June 8, 2012

ಜನುಮದ ಜೋಡಿ (1996) - ಜನುಮದ ಜೋಡಿ ನೀನು

  Sandeep T Gowda       Friday, June 8, 2012

ಜನುಮದ ಜೋಡಿ (1996) - ಜನುಮದ ಜೋಡಿ ನೀನು

ಚಿತ್ರ: ಜನುಮದ ಜೋಡಿ
ಸಾಹಿತ್ಯ, ಸಂಗೀತ: ವಿ.ಮನೋಹರ್
ಹಾಡಿರುವವರು: ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್

ಗಂ:
ಜನುಮದ ಜೋಡಿ ನೀನು ಕನಕ ಕನಕ
ಹುಡುಗನ ಪ್ರಾಣ ನೀನು ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ
ಮಾಲೆ ಮಾಲೆ ಮಾಲೆ ಮಾಲೆ
ಮಲ್ಲೆ ಹೂಮಾಲೆ
ಹೆ:
ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನನ್ನ ಕೊನೆಯ ತನಕ
--------------------
ಹೆ:
ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೆ ತೊಡಿಸಿದೆ ನೀ ಮುತ್ತಿನ ಒಡವೆ
ಗ:
ಒಡವೆ ತೊಡದೇನೆಯೂ ಚೆಲುವೇರ ಚೆಲುವೆ
ಎದೆ ತುಂಬಿಕೊಳ್ಳಲು ನಿನ್ನಾ ಪಡೆವೆ
ಹೆ:
ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ
ಗೆಲುವ ತರುವ ವರವೆ
ಗಂ:
ಅದು ಯಾವ ಜನುಮದಲೊ ಆಗೈತೆ
ನನಗು ನಿನಗು ಮದುವೆ
ಹೆ:
ನಿನ್ನ ಜೋಡಿ ಮಾಡಿದ ಆ ದೇವಗೆ
ಕೈಯ್ಯ ಮುಗಿವೆ ಮುಗಿವೆ

-------------------------
ಗಂ:
ಮೊದಲನೇ ನೋಟದಾಗೆ ಸೆಳೆದೆ ನೀ ಮನಸ
ಶಿವರಾತ್ರಿ ತಂದೆ ನೀ ದಿವಸ ದಿವಸ
ಹೆ:
ನಂಗೂ ಹಂಗಾಗೈತೆ ಕೇಳಯ್ಯ ಅರಸ
ಒಳಗೊಳಗೆ ಹಾಡೈತೆ ಹೃದಯ ಸರಸ
ಗಂ:
ನೆಲ ಮುಗಿಲು ಸೇರಿದರು ಬೇರಾಗದು
ನಮ್ಮ ಬಾಳ ಕಳಸ
ಹೆ:
ಒಡಲಾಳ ಚಂದದಲಿ ಹೇಳೈತೆ
ಪ್ರೀತಿ ಕಥೆಯ ಸೊಗಸ
ಗಂ:
ನಮ್ಮ ಬದುಕ ಹರಕೆಯ
ಪೂರೈಸಲು ದಿನವು ಹರುಷ ಹರುಷ
logoblog

Thanks for reading ಜನುಮದ ಜೋಡಿ (1996) - ಜನುಮದ ಜೋಡಿ ನೀನು

Previous
« Prev Post

No comments:

Post a Comment

Note: Only a member of this blog may post a comment.