ಸವಾರಿ(2009) - ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಚಿತ್ರಗೀತೆ | ಸವಾರಿ | ೨೦೦೯
ಗಾಯಕಿ: ಶ್ರೇಯಾ ಘೋಶಾಲ್ / ಸಾಧನ ಸರಗಮ್
ಸಂಗೀತ: ಮಣಿಕಾಂತ್ ಕದ್ರಿ
ಸಾಹಿತ್ಯ: ಸುದೀರ್ ಅತ್ತಾವರ್
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸತಾದ ಹರುಷ ಹರವೂ ಹಸಿ ಖುಷಿ ಕವನ
ಕನಸಲಿ ನನ್ನ ಸಾಗಿಸಿ… ಕಲರವ ನೀ ಪಸರಿಸಿ…ನೀ ಇನಿಯನೀ ಪ್ರೀತಿಗೆ ಸಾರಥಿ...
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೀ…ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೀ… ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
No comments:
Post a Comment
Note: Only a member of this blog may post a comment.