Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, April 25, 2012

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

  Sandeep T Gowda       Wednesday, April 25, 2012

ಸಂಜು ವೆಡ್ಸ್ ಗೀತಾ(2011) - ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಚಿತ್ರಗೀತೆ | ಸಂಜು ವೆಡ್ಸ್ ಗೀತಾ | ೨೦೧೧
ಸಂಗೀತ: ಜಸ್ಸಿ ಗಿಫ್ಟ್
ಗಾಯಕ: ಶ್ರೇಯಾ ಘೋಷಲ್

ಹಾ... ಹಾ... ಹಾ... ಹಾ...
ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ
ಕಡಲು ಕರೆದಂತೆ ನದಿಯನೂ ಭೇಟಿಗೆ
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ
ಕಡಲು ಕರೆದಂತೆ ನದಿಯನೂ ಭೇಟಿಗೆ

ಜೀವನಾ ಈ ಕ್ಷಣಾ ಶುರು ಆದಂತಿದೆ
ಕನಸಿನಾ ಊರಿನಾ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೇರೆ ಮೀರಿ
ಮಧು ಮಾಸದಂತೆ ಕೈ ಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ
ಕಡಲು ಕರೆದಂತೆ ನದಿಯನೂ ಭೇಟಿಗೆ
ಯಾರು ಬಂದಿರದ ಮನಸಲಿ ಓ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ

ಸಾವಿನಾ ಅಂಚಿನಾ ಬದುಕಂತಾದೆ ನೀ
ಸಾವಿರಾ ಸೂರ್ಯರಾ ಬೆಳಕಂತಾದೆ ನೀ
ಕೊನೆ ಆಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳ ಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ
ಕಡಲು ಕರೆದಂತೆ ನದಿಯನೂ ಭೇಟಿಗೆ
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ
logoblog

Thanks for reading ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

Previous
« Prev Post

No comments:

Post a Comment

Note: Only a member of this blog may post a comment.