ಒಮ್ಮೆ ಬಾರೋ ಒಮ್ಮೆ ಬಾರೋ - "ಸಂಜು ವೆಡ್ಸ್ ಗೀತ"
ಕವಿರಾಜ್ | ಚಿತ್ರಗೀತೆ | ಸಂಜು ವೆಡ್ಸ್ ಗೀತಾ | ೨೦೧೦
ಚಿತ್ರ: ಸಂಜು ವೆಡ್ಸ್ ಗೀತ
ಇಸವಿ: ೨೦೧೦
ಗಾಯಕಿ: ಶ್ರೇಯಾ ಘೋಶಾಲ್
ಸಾಹಿತ್ಯ: ಕವಿರಾಜ್ / ವಿ. ನಾಗೇಂದ್ರ ಪ್ರಸಾದ್
ಸಂಗೀತ: ಜಸ್ಸಿ ಗಿಫ್ಟ್
ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರೂ
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ, ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೇ ಮನಸಾಗಿದೆ, ಮಿಡುಕಾಡಿದೆ, ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರೂ
ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರೂ ಸುಳಿದಿಲ್ಲ ಇಲ್ಲಿ ನೀನು
ಕೈತುತ್ತು ಜಾರಿದಾಕ್ಷಣ ರಂಗೋಲಿಯು ಬರೆದೆನು
ಅ....ಅ.... ಅ............................
ಆ.......ಆಆಆಆ
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ, ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೇ ಮನಸಾಗಿದೆ, ಮಿಡುಕಾಡಿದೆ, ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರೂ
ಅದೇ ಹಾದಿ ತುಳಿವಾಗ ಎದೆ ತುಂಬಾ ನೂರು ನೋವು
ಇಳಿ ಸಂಜೆ ಕಳೆವಾಗ ಸುಳಿದಂತೆ ಇಲ್ಲಿ ಸಾವು
ಅಸುನೀಗೋ ಮುನ್ನ ನಿನ್ನನು ತುಸು ನೋಡಲು ಕಾದಿಹೆನು
ಅ....ಅ.... ಅ............................
ಆ.......ಆಆಆಆ
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ, ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೇ ಮನಸಾಗಿದೆ, ಮಿಡುಕಾಡಿದೆ, ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರೂ
No comments:
Post a Comment
Note: Only a member of this blog may post a comment.