Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಪರವಶನದೆನು - Paramatma

  Sandeep T Gowda       Tuesday, January 17, 2012
ಚಿತ್ರಗೀತೆ | ಪರಮಾತ್ಮ | ಯೋಗರಾಜ್ ಭಟ್ | ೨೦೧೧

ಪರವಶನದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ. (ಪಲ್ಲವಿ)
ಇದಕಿಂತ ಬೇಗ ಇನ್ನು ಸಿಗಬಾರದಿತ್ತೇ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನು.... ಕಳೆಯುವ ಮುನ್ನವೇ.

ಪರವಶನದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ........

ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು ಪ್ರೆಮಯೋಗಿಯಾಗಲೂ
ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳ ಬಲ್ಲೆ
ನನ್ನ ಏಕಾಂತವನ್ನು ತಿದ್ದಿ ಕೊಡು ನೀನೀಗ ನಿಂತಲ್ಲೇ
ನಾನೇನೆ ಅಂದರುನು ನನಗಿಂತ ಚೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೋ ಮುತ್ತೊಂದನು
ಕದಿಯುವ ಮುನ್ನವೇ

ಪರವಶನದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ......

ಹಾ ... ನಾನಾನ ... ನಾನಾನ ...
ಕನಸಲಿ ತುಂಬ ಕೆಟ್ಟಿರುವೇನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ.....
ನನ್ನ ಕೌತುಕ ಒಂದೊಂದೇ ಹೇಳ ಬೇಕು
ಆಲಿಸುವಾಗ ನೋಡು ನನ್ನನ್ನೇ ಸಾಕು
ಸಹವಾಸ ದೋಷದಿಂದ ಸರಿ ಹೋಗ ಬಹುದೇ ನಾನು
ನನಗಾಗಿಯೇ ಕಾದಿಟ್ಟುಕೋ ಹಠ ಒಂದನೂ
ಕೆಣಕುವ ಮುನ್ನವೇ.

ಪರವಶನದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ......
logoblog

Thanks for reading ಪರವಶನದೆನು - Paramatma

Previous
« Prev Post

No comments:

Post a Comment

Note: Only a member of this blog may post a comment.