ಚಿತ್ರ: ಮೊಗ್ಗಿನ ಮನಸ್ಸು
ಗಾಯನ: ಸೋನು ನಿಗಮ್
ನಟರು: ಯಶ್, ರಾಧಿಕ ಪಂಡಿತ್
i love you......ಓ....
i love you......
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....
ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....
No comments:
Post a Comment
Note: Only a member of this blog may post a comment.