Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು

  Sandeep T Gowda       Friday, January 20, 2012
ಚಿತ್ರ: ಮಾನಸ ಸರೋವರ
ಹಾಡಿದವರು: ಪಿ ಬಿ ಶ್ರೀನಿವಾಸ್
ನಟರು: ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ
ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ
ನಾ ಸ್ವರ್ಗವನೇ ಗೆಲ್ಲುವೆ

ವೇದಾಂತಿ ಹೇಳಿದನು......

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ
ನಾನೆಷ್ಟು ಧನ್ಯ ಧನ್ಯ

ವೇದಾಂತಿ ಹೇಳಿದನು.....
logoblog

Thanks for reading ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು

Previous
« Prev Post

No comments:

Post a Comment

Note: Only a member of this blog may post a comment.