Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, January 21, 2012

ಆಕಾಶ ಇಷ್ಟೇ ಯಾಕಿದೆಯೋ

  Sandeep T Gowda       Saturday, January 21, 2012
ಚಿತ್ರ: ಗಾಳಿಪಟ
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಗಣೇಶ್, ಡೈಸಿ ಮತ್ತು ಇತರರು

ನನೈ ನನನೈ..... ನನೈ ನನನೈ...... ನನೈ ನನನೈನಿ..... ನನೈ ನನನೈ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ

ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ.....ಗಾಳಿಪಟ ಗಾಳಿಪಟ ಗಾಳಿಪಟ

ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ....ಗಾಳಿಪಟ ಗಾಳಿಪಟ ಗಾಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....ಗಾಳಿಪಟ ಗಾಳಿಪಟ ಗಾಳಿಪಟ
logoblog

Thanks for reading ಆಕಾಶ ಇಷ್ಟೇ ಯಾಕಿದೆಯೋ

Previous
« Prev Post

No comments:

Post a Comment

Note: Only a member of this blog may post a comment.