Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, January 23, 2012

ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ

  Sandeep T Gowda       Monday, January 23, 2012
ಮಾತಾಡ್ ಮಾತಾಡು

ಗಾಯನ: ಜಿ.ವಿ.ಅತ್ರಿ, ಮಂಜುಳ ಗುರುರಾಜ್

ಗಂಡು: ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ
ಗುಂಪಿನಲ್ಲಿ ಮಾತಾಡು ಮಾತಾಡು ಮಲ್ಲಿಗೆ

ಹೆಣ್ಣು: ಒಬ್ಬನ್ನ ಕಟ್ಟಿದ್ದೆ ಒಬ್ಬನ್ನ ಬಿಟ್ಟಿದ್ದೆ
ಒಬ್ಬನ್ನ ಕರಕೊಂಡು ಒಳಗೋದೆ ಗೆಳೆಯಾ

ಗಂಡು: ಯಾವೋನ್ನ ಕಟ್ಟಿದ್ದೆ ಯಾವೋನ್ನ ಬಿಟ್ಟಿದ್ದೆ
ಯಾವನ್ನ ಕರಕೊಂಡು ಒಳಗೋದೆ ಮಲ್ಲಿಗೆ

ಹೆಣ್ಣು: ಹಸುವನ್ನ ಕಟ್ಟಿದ್ದೆ
ಕರುವನ್ನ ಬಿಟ್ಟಿದ್ದೆ
ಹಾಲನ್ನು ಕರಕೊಂಡು ಒಳಗೋದೆ ಚೆಲುವ

ಗಂಡು: ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ
ಗುಂಪಿನಲ್ಲಿ ಮಾತಾಡು ಮಾತಾಡು ಮಲ್ಲಿಗೆ

ಹೆಣ್ಣು: ಒಬ್ಬನ್ನ ತಳ್ಳಿದ್ದೆ ಒಬ್ಬನ್ನ ನೂಕಿದ್ದೆ
ಒಬ್ಬಾನ ಜೊತೆಯಲಿ ತಿರುಗಿ ಬಂದೆ ಗೆಳೆಯ

ಗಂಡು: ಯಾವೋನ್ನ ತಳ್ಳಿದ್ದೆ ಯಾವೋನ್ನ ನೂಕ್ಕಿದ್ದೆ
ಯಾವೋನ್ನ ಜೊತೆಯಲ್ಲಿ ತಿರುಗಿ ಬಂದೆ ಮಲ್ಲಿಗೆ

ಹೆಣ್ಣು: ಕದವನ್ನ ತಳ್ಳಿದ್ದೆ ಅದನೀಳಾ* ನೂಕಿದ್ದೆ
ದೀಪದ ಜೊತೆಯಲ್ಲಿ ತಿರುಗಿ ಬಂದೆ ಚೆಲುವ

ಗಂಡು: ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ
ಗುಂಪಿನಲ್ಲಿ ಮಾತಾಡು ಮಾತಾಡು ಮಲ್ಲಿಗೆ

ಹೆಣ್ಣು: ಒಬ್ಬನ್ನ ಹಾಸಿದ್ದೆ ಒಬ್ಬನ್ನ ಹೊದಿದ್ದೆ
ಒಬ್ಬನ್ನ ಎಳಕೊಂಡು ಮಲಗಿದ್ದೆ ಗೆಳೆಯ

ಗಂಡು: ಏನನ್ನ ಹಾಸಿದ್ದೆ ಏನನ್ನ ಹೊದಿದ್ದೆ
ಯಾರನ್ನ ಎಳಕೊಂಡು ಮಲಗಿದ್ದೆ ಮಲ್ಲಿಗೆ

ಹೆಣ್ಣು: ಹಾಸಿಗೆ ಹಾಸಿದ್ದೆ
ಕಂಬ್ಳೀಯ ಹೊದಿದ್ದೆ
ತಲೆ ದಿಂಬು ಎಳಕೊಂಡು
ಮಲಗಿದ್ದೆ ಚೆಲುವ

ಗಂಡು: ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ
ಗುಂಪಿನಲ್ಲಿ ಮಾತಾಡು ಮಾತಾಡು ಮಲ್ಲಿಗೆ

ಹೆಣ್ಣು: ಒಬ್ಬಂಗೆ ಕಾಲ್ ಕೊಟ್ಟೆ
ಒಬ್ಬಂಗೆ ಕೈ ಕೊಟ್ಟೆ
ಒಬ್ಬಂಗೆ ಸೀರೆಯನ್ನೆ ಎಳೆ ಕೊಟ್ಟೆ ಗೆಳೆಯ

ಗಂಡು: ಯಾರಿಗೆ ಕಾಲ್ ಕೊಟ್ಟೆ
ಯಾರಿಗೆ ಕೈ ಕೊಟ್ಟೆ
ಯಾರಿಗೆ ಸೀರೆಯನ್ನು ಎಳ ಕೊಟ್ಟೇ ಮಲ್ಲಿಗೆ

ಹೆಣ್ಣು: ಕಂಚ್ಗಾರೆಗೆ ಕಾಲ್ ಕೊಟ್ಟೆ
ಬಳೆಗಾರ್ಗೆ ಕೈ ಕೊಟ್ಟೆ
ಮಡಿವಾಳ್ಗೆ ಸೀರೆಯನ್ ಎಳೆದ್ ಕೊಟ್ಟೆ ಚೆಲುವ
logoblog

Thanks for reading ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಶ್ಯಾವಂತಿಗೆ

Previous
« Prev Post

No comments:

Post a Comment

Note: Only a member of this blog may post a comment.