ಚಿತ್ರ: ಹಾಗೆ ಸುಮ್ಮನೆ
ಗಾಯನ: ಸೋನು ನಿಗಮ್
ನಟರು: ಕಿರಣ್, ಸುಹಾಸಿ
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ
ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ....
ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದ ಮಾಹಿತಿ
ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ.....
No comments:
Post a Comment
Note: Only a member of this blog may post a comment.