Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, January 21, 2012

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ

  Sandeep T Gowda       Saturday, January 21, 2012
ಚಿತ್ರ: ಕವಿರತ್ನ ಕಾಳಿದಾಸ
ಹಾಡಿದವರು: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಜಯಪ್ರದ

ಆ.......

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು

ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನು

ಸದಾ ಕಣ್ಣಲೆ.......
logoblog

Thanks for reading ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ

Previous
« Prev Post

No comments:

Post a Comment

Note: Only a member of this blog may post a comment.