ಚಿತ್ರ: ಸಂಗಮ
ಹಾಡಿದವರು: ಗೋಪಿಕ ಪೂರ್ಣಿಮಾ
ನಟರು: ಗಣೇಶ್, ವೇದಿಕಾ
ಮಮ.........ಮಮ
ಮಮ.........ಮಮ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ..............ಮಮ ಮಮ
ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೇ
ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ........ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ...ಮಮ
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ ನನಗೆ ನನಗೆ ನನಗೆ ನನಗೆ
ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ.......ಮಮ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ..............ಮಮ
ಇವನ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು ಇದುವೇ ಬಯಕೆ ನಿನಗೆ ಹೊರುವೆ ಹರಕೆ
No comments:
Post a Comment
Note: Only a member of this blog may post a comment.