Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

  Sandeep T Gowda       Friday, January 20, 2012
ಚಿತ್ರ: ವಂಶಿ
ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್
ನಟರು: ಪುನೀತ್ ರಾಜಕುಮಾರ್, ನಿಕಿತ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ

ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......

ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......
logoblog

Thanks for reading ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

Previous
« Prev Post

No comments:

Post a Comment

Note: Only a member of this blog may post a comment.