ಚಿತ್ರ: ಅಮೃತ ವರ್ಷಿಣಿ
ಗಾಯಕಿ: ಕೆ ಎಸ್ ಚಿತ್ರ
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ
ಚೆಲುವನೆ ನಿನ್ನ ಮುಗುಳು ನಗೆ
ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ
No comments:
Post a Comment
Note: Only a member of this blog may post a comment.