ಚಿತ್ರಗೀತೆ | ಯೋಗರಾಜ್ ಭಟ್ | ಲೈಫು ಇಷ್ಟೇನೇ
ಚಿತ್ರ: ಲೈಫು ಇಷ್ಟೇನೇ (2011),
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು ಕಣ್ಣಲ್ಲಿ ನಗಲು ಬೇರೆ ಏನು ಹೇಳಲಿ ಇಂದು ನಾ..
ಮುಗಿಸು ಮೌನವನು ಸಹನೆ ಮರೆತು ತುಟಿಯ ದಾಟಳಿ ಮೊದಲ ಸ್ಪಂದನ..
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
No comments:
Post a Comment
Note: Only a member of this blog may post a comment.