ಚಿತ್ರಗೀತೆ | ಜಯಂತ ಕಾಯ್ಕಿಣಿ | ಮೊಗ್ಗಿನ ಮನಸು
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ಮನೋ ಮೂರ್ತಿ
ಗಾಯನ : ಸೋನು ನಿಗಮ್
ಒಹ್ ನನ್ನ ಮನವೇ..ಏನಾದೆ ನೀನು..
ಮಾತೆಲ್ಲ ಮರೆತು..ಮೂಕಾದೆ ಏನು..
ಒಹ್ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಲಾಗದೆನು
ಎದೆ ಬಿರಿವ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೆನು
ಒಹ್ ನನ್ನ ಮನವೇ ಮಾತಾಡೆ ಏನು..??
ಸಾಗರದ ಒಡಲೇ ಬರಿದಾಯಿತೇಕೆ..
ಇಬ್ಬನಿ ಹೊಳಪೇ ಚೂಪಾಯಿತೇಕೆ..
ಮುಸ್ಸಂಜೆ ಬಾನು ರಂಗಿಲ್ಲವೇಕೆ..
ತಂಗಾಳಿ ಸೋಕೆ ತಂಪಿಲ್ಲವೆಕೆ..
ಚಂದಿರನ ಮೊಗದಿ ಕಂಬನಿ ಹನಿ ಏಕೆ??
ಹೀಗೇಕೆ ಹೀಗೇಕೆ..??
ಭಾವಗಳೇ ಅದಲು ಬದಲಾಯಿತೇಕೆ..??
ಒಹ್ ನನ್ನ ಮನವೇ ಮಾತಾಡೆ ಏನು??
ಕಣ್ಣಳತೆ ದೂರ ಬರಿ ಕವಲು ದಾರಿ..
ಎದೆಯಾಳದಲ್ಲಿ ತಲ್ಲಣದ ಬೇಲಿ..
ಆಸೆಗಳ ಮೇಲೆ ಬಿಸಿ ಉಸಿರ ಲಾವ..
ಕನಸೇನೆ ಇರದೇ ಕುರುಡಾದ ಭಾವ..
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ..
ನಾನೀಗ ನಾನೀಗ..
ಹೊರ ಬರುವ ದಾರಿ ಹುಡುಕೋದು ಹೇಗೆ..??
ಒಹ್ ನನ್ನ ಮನವೇ ಮಾತಾಡೆ ಏನು..??
ಒಹ್ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಲಾಗದೆನು
ಎದೆ ಬಿರಿವ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೆನು
ಒಹ್ ನನ್ನ ಮನವೇ ಮಾತಾಡೆ ಏನು..??
No comments:
Post a Comment
Note: Only a member of this blog may post a comment.