ಕವನ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ಸಂತ ಶಿಶುನಾಳ ಷರೀಫ
ಸಾಹಿತ್ಯ: ಶಿಶುನಾಳ ಷರೀಫ್
ಗಾಯನ: ಸಿ.ಅಶ್ವಥ್ (ಚಿತ್ರಗೀತೆ)
ಗಾಯನ: ಶಿವಮೊಗ್ಗ ಸುಬ್ಬಣ್ಣ(ಭಾವಗೀತೆ)
ಸಂಗೀತ: ಸಿ.ಅಶ್ವಥ್
ಸ್ನೇಹ ಮಾಡಬೇಕಿಂಥವಳ
ಸ್ನೇಹ ಮಾಡಬೇಕಿಂಥವಳ
ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳ
ಸ್ನೇಹ ಮಾಡಬೇಕಿಂಥವಳ
ಚಂದ್ರಗಾವಿ ಶೀರಿನುಟ್ಟು
ದಿವ್ಯಕೊಮ್ಮೆಪಾರಿಜಮಗ್ಗಿ ಕುಪ್ಪಸ ತೊಟ್ಟು
ಬಂದಾಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು
ಸ್ನೇಹ ಮಾಡಬೇಕಿಂಥವಳ
ಅರಗಿಳಿ ಸಮ ಇವಳ ನುಡಿಯು
ಚೆಲ್ವ ಸುಳಿ ನಾಭಿ ಕುಚಕುಂಭಗಳ ಹಂಸ ನಡೆಯು
ಥಳ ಥಳಿಸುವ ತೋಳ್-ತೊಡೆಯು
ಬಳುಬಳುಕುವ ನಡುವಿನ ತಳಿರಡಿಯು
ಸ್ನೇಹ ಮಾಡಬೇಕಿಂಥವಳ
ಮುಕ್ತಿ ವನಿತೆ ಇವಳ ನೋಡಿ
ವಿರಕ್ತಿ ಸುರತ ಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಧೀಶನ ದಯದಿಂದ ಕೂಡಿ
ಸ್ನೇಹ ಮಾಡಬೇಕಿಂಥವಳ
No comments:
Post a Comment
Note: Only a member of this blog may post a comment.