ಕವನ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ಸಂತ ಶಿಶುನಾಳ ಷರೀಫ | ೧೯೯೦
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಗಾಯನ: ಸಿ.ಅಶ್ವಥ್
ಏ... ರೇ ರೇ ರೆ ರೆ ರಾ.... ಏ...
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಕಾಳಕತ್ತಲೆ ಒಳಗೆ ನಾನ್
ನೆಲಕೇರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಹರಕು ಚಪ್ಪರ ಕೇರು ಗಿಂಡಿ
ಮೇಲಕ್ಕೇ..ರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುನಾಳದೀಶತಾನು
ರೆ ರೇ............ ಏ.................
ರೇ...............ಏ... ಹೇ............
ಎಂತ ಶಿಶುನಾಳದೀಶತಾನು
ನಿಂತು ಪೊರೆವನು ಎಂದು ನಂಬಿದೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
No comments:
Post a Comment
Note: Only a member of this blog may post a comment.