ಚಿತ್ರಗೀತೆಯಲ್ಲಿ ಕವನ | ಜಿ. ಎಸ್. ಶಿವರುದ್ರಪ್ಪ | ಮಾನಸ ಸರೋವರ | ೧೯೮೩
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪನವರು
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ
ಕವಿಯೊಬ್ಬ ಸಾರಿದನು ಮಣ್ಣೆಲ್ಲ ಹೊನ್ನೂ ಹೊನ್ನೂ...{ಪಲ್ಲವಿ}
ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು ಓ ಇವಳೆ ಚೆಲುವೆ
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ...ಸ್ವರ್ಗವನೇ ಗೆಲ್ಲುವೆ...{ಪಲ್ಲವಿ}
ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿಯೇ ನಾಎಷ್ಟು ಧನ್ಯ....ನಾ ಎಷ್ಟು ಧನ್ಯ.......{ಪಲ್ಲವಿ}
No comments:
Post a Comment
Note: Only a member of this blog may post a comment.