Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಕಾಮನಬಿಲ್ಲು (1983) - ನೇಗಿಲ ಹಿಡಿದ

  Sandeep T Gowda       Tuesday, January 17, 2012
ಕವನ | ಕಾಮನಬಿಲ್ಲು | ಕುವೆಂಪು | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ೧೯೮೩
ಚಿತ್ರ - ಕಾಮನಬಿಲ್ಲು
ಸಾಹಿತ್ಯ - ಕುವೆಂಪು
ಸಂಗೀತ - ಉಪೇಂದ್ರಕುಮಾರ್
ಧ್ವನಿ - ಸಿ. ಅಶ್ವಥ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||

ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||
logoblog

Thanks for reading ಕಾಮನಬಿಲ್ಲು (1983) - ನೇಗಿಲ ಹಿಡಿದ

Previous
« Prev Post

No comments:

Post a Comment

Note: Only a member of this blog may post a comment.