ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಆಕಾಶ ಭೂಮಿಗಳ
ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೨ | ಎಲ್ಲಿ ಹನುಮನೋ ಅಲ್ಲಿ ರಾಮನು
ಆಲ್ಬಂ: ಎಲ್ಲಿ ಹನುಮನೋ ಅಲ್ಲಿ ರಾಮನು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ.ರಾಜ್ಕುಮಾರ್
ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೊ
ಸೂರ್ಯ-ಚಂದ್ರರೇ ನಯನಗಳೊ
ಸುಳಿವ ಮಿಂಚಿಗಳೆ ನಗೆಯೊ
ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೊ
ಮೇರುಪರ್ವತವೇ ನೀ ಹಿಡಿದ ಗದೆಯೊ
ಪಾದಕಮಲಗಳೆರಡು ಪಾತಾಳದಲ್ಲಿದೆಯೊ
ಅಂಜನಾಥನಯ್ಯ ವೀರಾಂಜನೇಯ ಮಾರುತಿರಾಯ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು
ನಿಂತ ರೀತಿಯೋ ತನುವ ಕಾಂತಿಯೋ
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ
ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು
ರೋಮ ರೋಮದಿ ರಾಮನಾಮವು
ರೋಮ ರೋಮದಿ ರಾಮನಾಮವು
ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
No comments:
Post a Comment
Note: Only a member of this blog may post a comment.